ಟ್ರಿಬ್ಯೂನ್ ಚಂಡೀಗಡ, ದಹಲಿ, ಜಲಂಧರ್, ದೆಹ್ರಾದೂನ್ ಮತ್ತು ಬಟಿಂಡಗಳಿಂದ ಪ್ರಕಟವಾಗುವ ಒಂದು ಭಾರತೀಯ ಇಂಗ್ಲೀಷ್ ಭಾಷೆಯ ದಿನಪತ್ರಿಕೆ ಆಗಿದೆ. ಇದು ಸರ್ದಾರ್ ದಯಾಳ್ ಸಿಂಗ್ ಮಜಿಥಿಯ , ಒಬ್ಬ ಲೋಕೋಪಕಾರಿ,ಯವರ ಮೂಲಕ ಲಾಹೋರ್ ನಲ್ಲಿ (ಈಗ ಪಾಕಿಸ್ತಾನದಲ್ಲಿದೆ),೨ ಫೆಬ್ರವರಿ ೧೮೮೧ ರಂದು ಸ್ಥಾಪಿಸಲಾಯಿತು, ಮತ್ತು ಇದು ಐದು ವ್ಯಕ್ತಿಗಳು ಒಳಗೊಂಡಿರುವ ಒಂದು ಧರ್ಮದರ್ಶಿಗಳ ಟ್ರಸ್ಟ್ ನಿಂದ ನಡೆಸಲ್ಪಡುತ್ತಿದೆ. ಇದೊಂದು ಪ್ರಮುಖ ಮತ್ತು ಗೌರವಾನ್ವಿತ ಭಾರತೀಯ ವೃತ್ತಪತ್ರಿಕೆಯಾಗಿದೆ. ಜಗತ್ತಿನಾದ್ಯಂತ ಇದರ ಪ್ರಸಾರವಿದೆ.[7] ಭಾರತದಲ್ಲಿ ಪಂಜಾಬ್ ಹರಿಯಾಣ, ಹಿಮಾಚಲ ಪ್ರದೇಶ, ಮತ್ತು ಚಂಡೀಗಡ ಕೇಂದ್ರಾಡಳಿತ ಪ್ರದೇಶ. ರಾಜ್ಯಗಳ ಪ್ರಮುಖ ದಿನಪತ್ರಿಕೆಯಾಗಿದೆ ಇಂಗ್ಲೀಷ್ ರಲ್ಲಿ ಟ್ರಿಬ್ಯೂನ್, ಹೊರತಾಗಿ ದೈನಿಕ್ ಟ್ರಿಬ್ಯೂನ್ (ಹಿಂದಿ)ಯಲ್ಲಿ ಮತ್ತು ಪಂಜಾಬಿ ಟ್ರಿಬ್ಯೂನ್: ಎಂಬ ಎರಡು ಸಹೋದರಿ ಪ್ರಕಾಶನವನ್ನು ಹೊಂದಿದೆ. ನರೇಶ್ ಕೌಶಲ್ ದೈನಿಕ್ ಟ್ರಿಬ್ಯೂನ್ ಮತ್ತು ವರಿಂದರ್ ವಾಲಿಯಾ ಪಂಜಾಬಿ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕರಾಗಿದ್ದಾರೆ. ರಾಜ್ ಚೆಂಗಪ್ಪ ಟ್ರಿಬ್ಯೂನ್ ಗ್ರೂಪ್ ‍ನ ಮುಖ್ಯ ಸಂಪಾದಕ ರಾಗಿದ್ದಾರೆ . ಟ್ರಿಬ್ಯೂನ್ ಇಂಟರ್ನೆಟ್ ಆವೃತ್ತಿಯನ್ನು ಜುಲೈ ೧೯೯೮ ರಲ್ಲಿ ಪ್ರಾರಂಭಿಸಲಾಯಿತು. ಉಪ ಸಂಪಾದಕ ರೂಪಿಂದರ್ ಸಿಂಗ್ ರಾಗಿದ್ದರು. ಪಂಜಾಬಿ ಟ್ರಿಬ್ಯೂನ್ ಮತ್ತು ದೈನಿಕ್ ಟ್ರಿಬ್ಯೂನ್ ನ ಇಂಟರ್ನೆಟ್ ಆವೃತ್ತಿಗಳು ೧೬ ಆಗಸ್ಟ್ ೨೦೧೦ ರಂದು ಬಿಡುಗಡೆಯಾಗಿದೆ . ಎಲ್ಲಾ ಮೂರು ಪತ್ರಿಕೆಗಳನ್ನು 'ಟ್ರಿಬ್ಯೂನ್ ಟ್ರಸ್ಟ್' ಪ್ರಕಟಿಸುತ್ತದೆ. == ಉಲ್ಲೇಖಗಳು‌‌ == == ಬಾಹ್ಯ ಕೊಂಡಿಗಳು‌‌ == ಟ್ರಿಬ್ಯೂನ್ ಅಧಿಕೃತ ವೆಬ್ಸೈಟ್ ಪಂಜಾಬಿ ಟ್ರಿಬ್ಯೂನ್ ಅಧಿಕೃತ ವೆಬ್ಸೈಟ್ ದೈನಿಕ್ ಟ್ರಿಬ್ಯೂನ್ ಅಧಿಕೃತ ವೆಬ್ಸೈಟ್